ಮಳೆ ಮತ್ತು ಒಳಿತಿಗಾಗಿ ವರುಣ ಯಾಗ ಹಾಗೂ ಸರಸ್ವತಿ ಯಾಗ.

ಮನುಕುಲದ ಒಳಿತಿಗಾಗಿ ಹಾಗೂ ಉತ್ತಮ ಮಳೆಗೆಂದು ಆಶಿಸುತ್ತ ತಿರುಪತಿ ದೇವಸ್ಥಾನದ ನಿರ್ವಹಣಾ ಮಂಡಳಿಯು ವರುಣ ಯಾಗ ಹಾಗೂ ಸರಸ್ವತಿ ಯಾಗವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ನಿಮಿತ್ತ ವೇದ ಶಾಸ್ತ್ರಜ್ಞರನ್ನು ಸಂಪರ್ಕಿಸಿ ಮುಹೂರ್ತವನ್ನು ಏರ್ಪಡಿಸಲು ತಿರುಪತಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಡಿ ಸಾಂಬಸಿವರಾವ್ ದೇವಸ್ಥಾನದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅಷ್ಟೇ ಅಲ್ಲದೆ ವೇದ ಶಾಸ್ತ್ರಜ್ನರೊಂದಿಗೆ ಮಾತನಾಡುತ್ತ ಪ್ರತಿ ದಿನ ಚೆನ್ನೈ ನಲ್ಲಿರುವ ದೇವಸ್ಥಾನದ ಮಾಹಿತಿ ಕೇಂದ್ರದಲ್ಲಿ ಪ್ರತಿ ದಿನ ವೇದಪಾರಾಯಣಂ ಹಾಗೂ ದಿವ್ಯ ಪ್ರಬಂಧ ಪಾರಯಣಂ ಅನ್ನು ನಡೆಸಲು ಸೂಚಿಸಿದ್ದಾರೆ. ಹಾಗೂ ಅಲ್ಲಿನ ಮಾಹಿತಿ ಕೇಂದ್ರದಲ್ಲಿ ಸ್ವಚ್ಛ ನೀರಿನ ಯಂತ್ರವನ್ನು ಅಳವಡಿಸಲು ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ನಿರ್ದೇಶನ ನೀಡಿದ್ದು ಮಾಹಿತಿ ಕೇಂದ್ರಕ್ಕೆ ಬರುವ ಎಲ್ಲ ಭಕ್ತರಿಗೆ ದೇವಸ್ಥಾನದ ಬಗ್ಗೆ ಅರಿವು ಮೂಡಿಸಲು ಉತ್ತಮ ಕಾರ್ಯಕ್ರಮಗಳನ್ನು ಪ್ರಸರಿಸುವಂತೆಯೂ ಆದೇಶಿಸಿದ್ದಾರೆ.Related posts

Leave a Comment